maunada mathu
Thursday, 7 March 2013
ಹೂಮಾಲೆ
ಏಕಾಂತದಲಿ ಬೀಸಿ ಬಂದ
ಅವಳ ನೆನಪೆನುವ ತಂಗಾಳಿಗೆ
ನನ್ನೊಳಗಿನ ಪದಗಳ
ತೋಟದಲಿನ ಎಟುಕದ
ಚೆಲುವಿನ ಹೂವುಗಳೆಲ್ಲಾ
ಉದುರಿ ಬಿತ್ತು, ನನ್ನ ಕೈ ಮೇಲೆ;
ಭಾವನೆಯ ದಾರದಲಿ
ಹಾಗೆಯೇ ಕುಳಿತು
ಪೋಣಿಸಿ ಮುಗಿಸಿದಾಗ
ಆಯಿತೊಂದು ಕವಿತೆಯೆನುವ
ಸುಂದರ ಹೂ ಮಾಲೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment