Thursday, 7 March 2013

ಶಾಪ...


ಶಿಲ್ಪಿಯ ಉಳಿಯ ಪೆಟ್ಟಿನ
ನೋವ ಸಹಿಸಲಾರದೆ
ಅವನ ಶಪಿಸತೊಡಗಿದ ಶಿಲೆಗೆ
ಮೂರ್ತಿಯಾಗಿ ಬದಲಾಗಿ
ಅದ್ಭುತವೆಂದು ನೋಡುಗರ
ಬಾಯಲ್ಲಿ ಹೊಗಳಿಸಿಕೊಂಡಾಗ,
ಪಾಪ ಪ್ರಜ್ಞೆ ಕಾಡತೊಡಗಿತಂತೆ,
ಆದರೆ ಅದೇ ಹೊತ್ತಿಗೆ
ಅಲ್ಲೆಲ್ಲೋ ಇನ್ನೊಂದು ಶಿಲೆ
ಅದೇ ಶಿಲ್ಪಿಯ ಪ್ರತಿ ಏಟಿಗೆ
ಮನಸಿನೊಳಗೇ ಶಪಿಸುತ್ತಿತ್ತಂತೆ

No comments:

Post a Comment