Thursday, 26 December 2013
ಅಟಲರಿಗೊಂದು ನಮನ...
ನಾಲಗೆಯಲಿ ವಾಗ್ಝರಿಯ ಗಂಗೋತ್ರಿ,
ಮನಸಿನಲೊಂದು ಕವಿಭಾವದ ಕಡಲು
ಕಂಗಳಲಿ ಬರಿಯ ಭವ್ಯ ಭಾರತದ ಕನಸು
ಹೃದಯದಲಿ ತಾಯಿ ಭಾರತಿಗೊಂದು ಗರ್ಭಗುಡಿ
ನಿಲುವಿನಲಿ ಸಭ್ಯತೆಯ ರಾಜ ಗಾಂಭೀರ್ಯ
ರಾಜಕೀಯದ ಕೆಸರಿನಲರಳಿದ " ಕಮಲ "
ಅವರೇ ಅಜಾತಶತ್ರು ನಮ್ಮ ನೆಚ್ಚಿನ " ಅಟಲ "
ನಿರಾಳ...
ಭಾವಾಭಿವ್ಯಕ್ತಿಗೆ
ಹಲವು
ಮಾರ್ಗಗಳಿದ್ದರೂ
ನನ್ನೀ ಕವಿಮನಕ್ಕೆ
ನಿರಾಳತೆಯ
ಅನುಭವವಾಗುವುದು
ಭಾವನೆಗಳು
ಹಾಳೆಯ ಮೇಲಿನ
ಪದಗಳಾದಾಗಲೇ..
ಬೆರಗು
ಸುತ್ತಲೂ ಹರಡಿದ್ದ
ಕತ್ತಲಿಗೆ ಹೆದರಿ
ಅಡಗಿ ಕುಳಿತಿದ್ದ ರವಿ,
ಹಿಡಿದು ಕಡಲ ತಾಯಿಯ
ನೀಲಿ ಸೀರೆಯ ಸೆರಗು ;
ಕತ್ತಲು ಮೆಲ್ಲಗೆ ಮರೆಯಾಗೆ
ಆ ಸೆರಗ ಮುಸುಕನು ಸರಿಸಿ
ಹೊರಬರುವ ನೇಸರ
ತನ್ನೊಡಲ ಬೆಳ್ಳಿಕಿರಣದ
ರೋಮಗಳ ತೋರಿಸೆ
ಜಗಕ್ಕೆಲ್ಲಾ ಬೆರಗು...
ಭಾಗ್ಯ
ಪ್ರತಿದಿನವೂ
ಸಾವು ಬೆನ್ನಟ್ಟಿ
ಬಂದರೂ...
ಮತ್ತದೇ ರೂಪದಲಿ,
ಮತ್ತದೇ ಕಾಯಕದಿ
ಹುಟ್ಟಿ ಬರುವ ಭಾಗ್ಯ
ಬರಿಯ ನೇಸರನಿಗಷ್ಟೇ...
ನೆನಪಿನಲೆ...
ಉದ್ಯಾನವನದೊಳಗೆ
ಏಕಾಂಗಿಯಾಗಿ
ಕುಳಿತಿದ್ದಾಗ
ನನ್ನೊಳಗೆದ್ದ
ಅವಳ ನೆನಪಿನಲೆಗೆ
ಅಲ್ಲಿದ್ದ ಮೊಗ್ಗುಗಳೆಲ್ಲಾ
ಅರಳತೊಡಗಿದೆ.
ಅರಿವು
ಮುಳುಗುವ
ಸಂಭವನೀಯತೆಯ
ಅರಿವಿದ್ದರೂ
ಮತ್ತೆ ಮತ್ತೆ
ಪಡುವಣದಿ ರವಿ
ಕಡಲ ಸನಿಹಕೆ
ತೆರಳಿದಂತೆ...
ನನ್ನೊಳಗೇ ಅಳುವ
ಸಂಭವನೀಯತೆಯ
ಅರಿವಿದ್ದೂ...
ಮತ್ತೆ ಮತ್ತೆ
ನಾ ತೆರಳುವೆ
ಅವಳ ನೆನಪಿನ
ಕಡಲ ಕಡೆಗೆ
ಗುಲಾಮ
ಬಯಕೆಗಳೆಲ್ಲವೂ ಇತ್ತು
ಇರಲೇ ಇಲ್ಲ
ಎಂದು ಸುಳ್ಳು ಹೇಳುವುದಿಲ್ಲ;
ಹೆತ್ತವರು ಇತ್ತ
ಸಂಸ್ಕಾರದ ಫಲವಾಗಿ
ಅವುಗಳೇ ನನ್ನ
ಗುಲಾಮರಾದವೇ ಹೊರತು
ನಾನದರ ಗುಲಾಮನಾಗಲಿಲ್ಲ.
ಕೆಟ್ಟ ಗಳಿಗೆ
ಅದ್ಯಾವ ಕೆಟ್ಟ ಗಳಿಗೆಯಲಿ
ನಾನಂದಿದ್ದೆನೋ ಅವಳ ಬಳಿ
" ನಾ ನಿನ್ನ ಹೃದಯ ನಿವಾಸಿ "
ಈಗ ಪ್ರತಿ ತಿಂಗಳೂ ಬಾಡಿಗೆ
ಪಡೆದೇ ತೀರುತ್ತಾಳೆ
ನನ್ನ ಕಾಡಿಸಿ, ಪೀಡಿಸಿ.
ನಿರಾಳ ನಿದ್ರೆ
ಭರತ ಮಾತೆಯ
ಕತ್ತನು ಹಿಸುಕುತಿದ್ದ
ನಾಲ್ಕು "ಕೈ"ಗಳು
ತುಂಡಾಗಿ ಬಿದ್ದುದ
ಕಂಡು ಬರಬಹುದೆನಗೆ
ಇಂದು ನಿರಾಳ ನಿದ್ರೆ
ಪರಿಸ್ಥಿತಿ
ಅವಳ ನೆನಪುಗಳನು
ಹೊರಗೆಳೆಯುವಾಗಲೆಲ್ಲಾ
ನನ್ನ ಪರಿಸ್ಥಿತಿ ;
ದ್ರೌಪದಿಯ
ಸೀರೆಯನೆಳೆಯ
ತೊಡಗಿದ
ದುಶ್ಯಾಸನನಂತಾಗುತ್ತದೆ.
ಕನಸಿನ ಮುತ್ತು..
ಅವಳಿಗಾಗಿ
ನಾ " ಕಣ್ಮುಚ್ಚಿ "
ಕೊಟ್ಟಿದ್ದ
ಮುತ್ತುಗಳೆಲ್ಲಾ...
.
.
.
ವಾಸ್ತವದಲಿ
ನನ್ನ ತಲೆದಿಂಬಿನ
ಪಾಲಾಗಿತ್ತು.
Thursday, 5 December 2013
ಏಕಾದಶಿ
ಅವಳೆನ್ನ ನೋಟದ
ಬಲೆಗೆ ಸಿಗದಂದೆಲ್ಲಾ
ನನ್ನಕಂಗಳಿಗೆ
ಏಕಾದಶಿ;
ಹಗಲೆಲ್ಲಾ ಹಾಗೇ
ಕಳೆದು, ಇರುಳ
ನಿದಿರೆಯಾ ತಟ್ಟೆಯಲಿ
ಸ್ವೀಕರಿಸಬೇಕು
ಅವಳ ಕನಸಿನ
ಫಲಾಹಾರ
ತಪ್ಪು....???
ಆಕೆ, ನಮ್ಮ ನಡುವಿನ
ಪ್ರೇಮ ಸಂಬಂಧವನೇ
ಮುರಿಯುವಂಥಾ ತಪ್ಪು
ನಾನೇನು ಮಾಡಿದ್ದೆನೋ
ಗೊತ್ತಾಗುತ್ತಿಲ್ಲ....??!!
ಆ ದಿನ ಸಂಜೆಯಲಿ
ಅವಳ ಕೆನ್ನೆಯ ಮೇಲೆ
ಕುಳಿತು ನೆತ್ತರ
ಹೀರುತ್ತಿದ್ದ ಸೊಳ್ಳೆಯನು
ಹೊಡೆದು ಕೊಂದು,
ನಿನ್ನ ನೋಯಿಸುವವರಿಗಿದೇ
ಗತಿ... ಎಂದು
ನನ್ನ ಪ್ರೇಮದಾಳವನು
ತೋರಿಸಿದ್ದು ತಪ್ಪೇ.. ?
ಪ್ರೇಮ ಸಂಬಂಧವನೇ
ಮುರಿಯುವಂಥಾ ತಪ್ಪು
ನಾನೇನು ಮಾಡಿದ್ದೆನೋ
ಗೊತ್ತಾಗುತ್ತಿಲ್ಲ....??!!
ಆ ದಿನ ಸಂಜೆಯಲಿ
ಅವಳ ಕೆನ್ನೆಯ ಮೇಲೆ
ಕುಳಿತು ನೆತ್ತರ
ಹೀರುತ್ತಿದ್ದ ಸೊಳ್ಳೆಯನು
ಹೊಡೆದು ಕೊಂದು,
ನಿನ್ನ ನೋಯಿಸುವವರಿಗಿದೇ
ಗತಿ... ಎಂದು
ನನ್ನ ಪ್ರೇಮದಾಳವನು
ತೋರಿಸಿದ್ದು ತಪ್ಪೇ.. ?
ಖುದಿರಾಮ್ ಬೋಸ್...
ತನ್ನ ಹೊತ್ತವಳ
ದಾಸ್ಯವನು ಕಂಡು
ನೆತ್ತರದೆಷ್ಟು ಕುದಿಯುತಿತ್ತೋ...?
ಮನದಿ ನಿರ್ಧರಿಸಿ
ಸಿಡಿಸಿಯೇ ಬಿಟ್ಟ.
ಶತ್ರು ಪಾಳಯದಲಿ
ಬಾಂಬೊಂದನು,
ಎಳೆಯ ಪ್ರಾಯದಲಾತ;
ಹದಿನೆಂಟು ವರ್ಷ,
ಏಳು ತಿಂಗಳು,
ಹನ್ನೊಂದು ದಿನದಲೇ
ನೇಣು ಕುಣಿಕೆಗೆ
ಕೆಚ್ಚೆದೆಯಲಿ ಕೊರಳೊಡ್ಡಿದ,
ಭಾರತ ಮಾತೆಯು
ತೊಡಿಸಿದ ಹಾರವೆನುತ.
---ಕೆ.ಗುರುಪ್ರಸಾದ್
ಅತ್ಯಂತ ಎಳೆಯ ಪ್ರಾಯದಲ್ಲಿ ಗಲ್ಲು ಶಿಕ್ಷೆಗೊಳಗಾದ " ಹರೇನ್ ಸರ್ಕಾರ್ " ಎನ್ನುವ ಗುಪ್ತನಾಮದ ಬಂಗಾಲದ ಯುವಕ್ರಾಂತಿಕಾರಿ " ಖುದಿರಾಮ್ ಬೋಸ್ "ರ ಜನನ ದಿನದಂದು ಅವನಿಗೊಂದು ನನ್ನ ನುಡಿ ನಮನ.... ಅವರ ಜೀವನಗಾಥೆಯು ನಮ್ಮ ರಕ್ತವನ್ನೂ ಕುದಿಯುವಂತೆ ಮಾಡಲಿ ಎನ್ನುವುದೇ ನನ್ನ ಆಸೆ...
ತನ್ನ ಹೊತ್ತವಳ
ದಾಸ್ಯವನು ಕಂಡು
ನೆತ್ತರದೆಷ್ಟು ಕುದಿಯುತಿತ್ತೋ...?
ಮನದಿ ನಿರ್ಧರಿಸಿ
ಸಿಡಿಸಿಯೇ ಬಿಟ್ಟ.
ಶತ್ರು ಪಾಳಯದಲಿ
ಬಾಂಬೊಂದನು,
ಎಳೆಯ ಪ್ರಾಯದಲಾತ;
ಹದಿನೆಂಟು ವರ್ಷ,
ಏಳು ತಿಂಗಳು,
ಹನ್ನೊಂದು ದಿನದಲೇ
ನೇಣು ಕುಣಿಕೆಗೆ
ಕೆಚ್ಚೆದೆಯಲಿ ಕೊರಳೊಡ್ಡಿದ,
ಭಾರತ ಮಾತೆಯು
ತೊಡಿಸಿದ ಹಾರವೆನುತ.
---ಕೆ.ಗುರುಪ್ರಸಾದ್
ಅತ್ಯಂತ ಎಳೆಯ ಪ್ರಾಯದಲ್ಲಿ ಗಲ್ಲು ಶಿಕ್ಷೆಗೊಳಗಾದ " ಹರೇನ್ ಸರ್ಕಾರ್ " ಎನ್ನುವ ಗುಪ್ತನಾಮದ ಬಂಗಾಲದ ಯುವಕ್ರಾಂತಿಕಾರಿ " ಖುದಿರಾಮ್ ಬೋಸ್ "ರ ಜನನ ದಿನದಂದು ಅವನಿಗೊಂದು ನನ್ನ ನುಡಿ ನಮನ.... ಅವರ ಜೀವನಗಾಥೆಯು ನಮ್ಮ ರಕ್ತವನ್ನೂ ಕುದಿಯುವಂತೆ ಮಾಡಲಿ ಎನ್ನುವುದೇ ನನ್ನ ಆಸೆ...
ನೋವು...
ನಿದ್ರೆಯ ಮೂಡಿನಲ್ಲಿದ್ದಂತೆ
ಕಂಡ ಓರ್ವ ಚೆಲುವೆ
ಬಸ್ಸಿನಲಿ ಬಳಿ
ಬಂದು ಕುಳಿತುಕೊಳಲು
ಮನದಿ ಹರುಷಪಟ್ಟು
ಭುಜವ ವಾಲಿಸಿ ಕುಳಿತೆ;
ನನ್ನ ದೌರ್ಭಾಗ್ಯಕ್ಕೆ
ನಾನಿಳಿಯುವವರೆಗೂ ಆಕೆಗೆ
ನಿದ್ದೆ ಹತ್ತಲೇ ಇಲ್ಲ;
ಅಬ್ಬಾ ಕಾಡುತಿದೆಯೀಗ ಭುಜನೋವು
ಮನೆಗೆ ಹೋಗಿ ಹಚ್ಚಬೇಕು ಮೂವು
ಕಂಡ ಓರ್ವ ಚೆಲುವೆ
ಬಸ್ಸಿನಲಿ ಬಳಿ
ಬಂದು ಕುಳಿತುಕೊಳಲು
ಮನದಿ ಹರುಷಪಟ್ಟು
ಭುಜವ ವಾಲಿಸಿ ಕುಳಿತೆ;
ನನ್ನ ದೌರ್ಭಾಗ್ಯಕ್ಕೆ
ನಾನಿಳಿಯುವವರೆಗೂ ಆಕೆಗೆ
ನಿದ್ದೆ ಹತ್ತಲೇ ಇಲ್ಲ;
ಅಬ್ಬಾ ಕಾಡುತಿದೆಯೀಗ ಭುಜನೋವು
ಮನೆಗೆ ಹೋಗಿ ಹಚ್ಚಬೇಕು ಮೂವು
ಆತ್ಮಹತ್ಯೆ....
ತಾ ಬೆಳೆದ ಬೆಳೆಗೆ
ಬೇಡಿದ ಬೆಲೆಗಿಂತಲೂ
ಮೀರಿದ ಧನರಾಶಿ ಸಿಕ್ಕಿತ್ತು,
ಆದರದನು ಪಡೆಯಲು
ಅವನೇ ಇಲ್ಲ, ಕಾರಣ
ಅನಂತ ದೂರಕ್ಕೆ ಹೋಗಿ ಬಿಟ್ಟ
ತನ್ನುಸಿರ ಬೆಲೆಯನು ತೆತ್ತು.
ಅವನಿಗೆ ಬದಲಾಗಿ
ಪಡೆಯಲಿರುವವರೂ ಕಂಗಾಲು,
ಎದೆಬಿರಿವಂತೆ ಅತ್ತೂ ಅತ್ತೂ...
ತನಗಧಿಕಾರ ದೊರೆಯುವುದಕೆ
ಇವರೆಲ್ಲರ ಬೆಂಬಲವೂ ಇತ್ತು,
ಎನುವ ಕಡೆಗಣಿಸಲಾಗದ ಸತ್ಯ
ಹಣ ಕೊಟ್ಟು ಕೈ ತೊಳೆದ
ಪುಡಾರಿಗೆಲ್ಲಿ ಗೊತ್ತು...?
ಬೇಡಿದ ಬೆಲೆಗಿಂತಲೂ
ಮೀರಿದ ಧನರಾಶಿ ಸಿಕ್ಕಿತ್ತು,
ಆದರದನು ಪಡೆಯಲು
ಅವನೇ ಇಲ್ಲ, ಕಾರಣ
ಅನಂತ ದೂರಕ್ಕೆ ಹೋಗಿ ಬಿಟ್ಟ
ತನ್ನುಸಿರ ಬೆಲೆಯನು ತೆತ್ತು.
ಅವನಿಗೆ ಬದಲಾಗಿ
ಪಡೆಯಲಿರುವವರೂ ಕಂಗಾಲು,
ಎದೆಬಿರಿವಂತೆ ಅತ್ತೂ ಅತ್ತೂ...
ತನಗಧಿಕಾರ ದೊರೆಯುವುದಕೆ
ಇವರೆಲ್ಲರ ಬೆಂಬಲವೂ ಇತ್ತು,
ಎನುವ ಕಡೆಗಣಿಸಲಾಗದ ಸತ್ಯ
ಹಣ ಕೊಟ್ಟು ಕೈ ತೊಳೆದ
ಪುಡಾರಿಗೆಲ್ಲಿ ಗೊತ್ತು...?
ಸುಳ್ಳು...
ಪ್ರಿಯೆ....
ನಿನ್ನ ಚೆಲುವಿನ
ಮೊಗವ ನೋಡದೆಯೇ
ನನಗೆಲ್ಲಿಯ ಹಸಿವು...?
ಹಿಡಿ ತುತ್ತೂ ಗಂಟಲಿನಿಂದ
ಕೆಳಗಿಳಿಯುತಿಲ್ಲ...
ಎಂದವಳ ಜೊತೆ
ದೂರವಾಣಿಯಲಿ
ಹೇಳುತಿರುವಾಗಲೇ
ಬರಬೇಕೆ.....?
.
.
.
ಹಾಳಾದ ತೇಗು...
ನಿನ್ನ ಚೆಲುವಿನ
ಮೊಗವ ನೋಡದೆಯೇ
ನನಗೆಲ್ಲಿಯ ಹಸಿವು...?
ಹಿಡಿ ತುತ್ತೂ ಗಂಟಲಿನಿಂದ
ಕೆಳಗಿಳಿಯುತಿಲ್ಲ...
ಎಂದವಳ ಜೊತೆ
ದೂರವಾಣಿಯಲಿ
ಹೇಳುತಿರುವಾಗಲೇ
ಬರಬೇಕೆ.....?
.
.
.
ಹಾಳಾದ ತೇಗು...
ಪ್ರೀತಿ....
ನನ್ನ ಪ್ರತಿಯೊಂದು
ಪ್ರೀತಿಯೂ
ಶುರುವಾಗುವುದು
ರಾತ್ರಿಯ ಆಕಳಿಕೆಯಲ್ಲಿ
ಮತ್ತು ಮುರಿದು
ಬೀಳುವುದು....
ನಸುಕಿನ
ಅಲರಾಮಿನ ಸದ್ದಿನಲ್ಲಿ
ಪ್ರೀತಿಯೂ
ಶುರುವಾಗುವುದು
ರಾತ್ರಿಯ ಆಕಳಿಕೆಯಲ್ಲಿ
ಮತ್ತು ಮುರಿದು
ಬೀಳುವುದು....
ನಸುಕಿನ
ಅಲರಾಮಿನ ಸದ್ದಿನಲ್ಲಿ
ಬಾಗಿಲಿಗೆ ಬೀಗ
ಬರಿಯ ನಿರಾಕರಣೆಗಷ್ಟೇ
ಸೀಮಿತಗೊಳಿಸಬಹುದಿತ್ತು...
ಅಂಥಾ ಭಾವನೆಯೇನೂ
ನನ್ನಲಿಲ್ಲ ಎನ್ನುವಲ್ಲಿಗಾದರೂ
ನಿಲ್ಲಿಸಿಬಿಡಬಹುದಿತ್ತು...
ಅವಳೋ.. ಮುಂದುವರಿದು
ನೀ ನನ್ನ ಸಹೋದರನಂತೆ
ಎಂದು ಮೆಲ್ಲನುಲಿದು,
ಮುಂದೆಂದಾದರೂ ಪರಿವರ್ತನೆಯಾಗಿ
ತೆರೆಯಬಹುದಾಗಿದ್ದ ನಿರೀಕ್ಷೆಯ
ಬಾಗಿಲಿಗೂ ದೊಡ್ದ ಬೀಗ
ಜಡಿದುಬಿಟ್ಟಳು ಹಾಳಾದವಳು...
ಸೀಮಿತಗೊಳಿಸಬಹುದಿತ್ತು...
ಅಂಥಾ ಭಾವನೆಯೇನೂ
ನನ್ನಲಿಲ್ಲ ಎನ್ನುವಲ್ಲಿಗಾದರೂ
ನಿಲ್ಲಿಸಿಬಿಡಬಹುದಿತ್ತು...
ಅವಳೋ.. ಮುಂದುವರಿದು
ನೀ ನನ್ನ ಸಹೋದರನಂತೆ
ಎಂದು ಮೆಲ್ಲನುಲಿದು,
ಮುಂದೆಂದಾದರೂ ಪರಿವರ್ತನೆಯಾಗಿ
ತೆರೆಯಬಹುದಾಗಿದ್ದ ನಿರೀಕ್ಷೆಯ
ಬಾಗಿಲಿಗೂ ದೊಡ್ದ ಬೀಗ
ಜಡಿದುಬಿಟ್ಟಳು ಹಾಳಾದವಳು...
ಕಿವುಡ....
ಧರ್ಮಶೃದ್ಧೆ ಇರದ
ವಿಚಾರವಾದಿ ಸಾಹಿತಿಯೊಬ್ಬ,
ತನ್ನ ಕಿವಿಯ ತುಂಬಾ
ಅಪನಂಬಿಕೆಯ ಕೊಳೆಯ
ತುಂಬಿಕೊಂಡು ಕಿವುಡನಾದ ;
ಕೇಳುವ ಆಸಕ್ತಿಯನು
ಮೊದಲೇ ತೊರೆದಾತ ಈಗ
" ಯಾವ ಧರ್ಮದ
ದೇವರೂ ಮಾತಾಡಿಲ್ಲ..."
ಎಂದು ಡಂಗುರ ಸಾರತೊಡಗಿದ.
ವಿಚಾರವಾದಿ ಸಾಹಿತಿಯೊಬ್ಬ,
ತನ್ನ ಕಿವಿಯ ತುಂಬಾ
ಅಪನಂಬಿಕೆಯ ಕೊಳೆಯ
ತುಂಬಿಕೊಂಡು ಕಿವುಡನಾದ ;
ಕೇಳುವ ಆಸಕ್ತಿಯನು
ಮೊದಲೇ ತೊರೆದಾತ ಈಗ
" ಯಾವ ಧರ್ಮದ
ದೇವರೂ ಮಾತಾಡಿಲ್ಲ..."
ಎಂದು ಡಂಗುರ ಸಾರತೊಡಗಿದ.
ಯಾರು....?
ಒಂದಷ್ಟು ಜನ ಅಪರಿಚಿತರು
ನೆರೆಯ ನಾಡಿಂದ ಬಂದು,
ಅಂದು ನಮ್ಮ ಜೀವದ
ಜೊತೆ ಚೆಲ್ಲಾಟವಾಡಿದ್ದರು ;
ವೀರ ಯೋಧರುಗಳು,
ಮತ್ತೊಂದಷ್ಟು ಆರಕ್ಷಕರು
ನಮ್ಮುಸಿರ ಕಾಪಾಡುವುದಕಾಗಿ
ತಮ್ಮ ಪ್ರಾಣಜ್ಯೋತಿಯನೇ
ತಮ್ಮ ಕೈಯಾರೆ ಆರಿಸಿದರು ;
ಇಲ್ಲೊಂದಿಷ್ಟು ಜನ ನೇತಾರರು
ನಮ್ಮದೇ ನಾಡಿನಲಿ ಹುಟ್ಟಿದವರು
ಇಂದು ನಮ್ಮ ಭಾವನೆಯ
ಜೊತೆ ಚೆಲ್ಲಾಟವಾಡುತ್ತಿದ್ದಾರೆ,
ಕಣ್ಣಿದ್ದೂ ಕುರುಡರಾದರೆ ನಾವು
ಇಂಥವರಿಗೆಲ್ಲಾ ಪಾಠ ಕಲಿಸುವವರ್ಯಾರು...?
26/11 ರ ಹುತಾತ್ಮರಿಗೆಲ್ಲರಿಗೂ ನನ್ನ ಕೋಟಿ ನಮನಗಳು
ನೆರೆಯ ನಾಡಿಂದ ಬಂದು,
ಅಂದು ನಮ್ಮ ಜೀವದ
ಜೊತೆ ಚೆಲ್ಲಾಟವಾಡಿದ್ದರು ;
ವೀರ ಯೋಧರುಗಳು,
ಮತ್ತೊಂದಷ್ಟು ಆರಕ್ಷಕರು
ನಮ್ಮುಸಿರ ಕಾಪಾಡುವುದಕಾಗಿ
ತಮ್ಮ ಪ್ರಾಣಜ್ಯೋತಿಯನೇ
ತಮ್ಮ ಕೈಯಾರೆ ಆರಿಸಿದರು ;
ಇಲ್ಲೊಂದಿಷ್ಟು ಜನ ನೇತಾರರು
ನಮ್ಮದೇ ನಾಡಿನಲಿ ಹುಟ್ಟಿದವರು
ಇಂದು ನಮ್ಮ ಭಾವನೆಯ
ಜೊತೆ ಚೆಲ್ಲಾಟವಾಡುತ್ತಿದ್ದಾರೆ,
ಕಣ್ಣಿದ್ದೂ ಕುರುಡರಾದರೆ ನಾವು
ಇಂಥವರಿಗೆಲ್ಲಾ ಪಾಠ ಕಲಿಸುವವರ್ಯಾರು...?
26/11 ರ ಹುತಾತ್ಮರಿಗೆಲ್ಲರಿಗೂ ನನ್ನ ಕೋಟಿ ನಮನಗಳು
ಟೀಚರ್...
ಬಹುಶಃ ಅವಳು
ಆಗಿದ್ದಿರಬಹುದು...!??
ಪ್ರಾಣಾಯಾಮದ ಟೀಚರು;
ಕಾರಣ...
ನನಗರಿವಿಲ್ಲದಂತೆಯೇ
ದೀರ್ಘವಾದ ಶ್ವಾಸವನು
ತೆಗೆದುಕೊಳ್ಳುತ್ತೇನೆ.
ಬಂದರೆ ಅವಳು ನನ್ನೆದುರು ;
ಮತ್ತಾಕೆ ಮರೆಯಾದಾಗ...
ನಿರಾಸೆಯ
ದೀರ್ಘ ನಿಟ್ಟುಸಿರು.
ಆಗಿದ್ದಿರಬಹುದು...!??
ಪ್ರಾಣಾಯಾಮದ ಟೀಚರು;
ಕಾರಣ...
ನನಗರಿವಿಲ್ಲದಂತೆಯೇ
ದೀರ್ಘವಾದ ಶ್ವಾಸವನು
ತೆಗೆದುಕೊಳ್ಳುತ್ತೇನೆ.
ಬಂದರೆ ಅವಳು ನನ್ನೆದುರು ;
ಮತ್ತಾಕೆ ಮರೆಯಾದಾಗ...
ನಿರಾಸೆಯ
ದೀರ್ಘ ನಿಟ್ಟುಸಿರು.
ಚಳಿ
ಬಚ್ಚಲು ಮನೆಯ
ಮೂಲೆಯಲ್ಲಿ ನಿನ್ನೆ
ಸಂಜೆ ಅಮ್ಮ ತಂದಿಟ್ಟ
ರಾಶಿ ರಾಶಿ ತರಗೆಲೆ...
ಅದನು ಸುಟ್ಟು ಸಿಕ್ಕ
ಶಾಖದಿಂದ ಆಯಿತು
ನನ್ನ ಕಾಡುತಿದ್ದ
ಚಳಿರಾಯನ ಕೊಲೆ,
ಮೂಲೆಯಲ್ಲಿ ನಿನ್ನೆ
ಸಂಜೆ ಅಮ್ಮ ತಂದಿಟ್ಟ
ರಾಶಿ ರಾಶಿ ತರಗೆಲೆ...
ಅದನು ಸುಟ್ಟು ಸಿಕ್ಕ
ಶಾಖದಿಂದ ಆಯಿತು
ನನ್ನ ಕಾಡುತಿದ್ದ
ಚಳಿರಾಯನ ಕೊಲೆ,
ಸನಿಹ
ಪ್ರೀತಿ ಸೂಸುವ
ನಗುವನಿನ
ಕಂಪನು
ಅವಳೆದುರು
ಚೆಲ್ಲುತ್ತಿದ್ದರೂ
ಯಾಕೋ ...?
ಆಕೆ ನನ್ನ
ಕೈಗೆಟಕುವಷ್ಟು
ಸನಿಹಕ್ಕೆ
ಬಾರಲೇ ಇಲ್ಲ
ವಿದಾಯ
ಬಾಲ್ಯದಲಿನ
ಪ್ರತಿಯೊಂದು
ಕ್ಷಣಗಳನು
ಮೆಲುಕು
ಹಾಕುತ್ತಾ,
ತನ್ನ ಕೈ
ಹಿಡಿದು
ಬೆಳೆಸಿದವರ
ನೆನೆದುಕೊಳ್ಳುತ್ತಾ,
ಕೃತಜ್ಞತೆಯ
ಸಲ್ಲಿಸುವಲ್ಲಿ
ಎಡವಿಬಿಟ್ಟೇನೋ
ಎಂದು
ಗಾಬರಿಯಾಗುತ್ತಾ,
ಭಾವುಕ
ಮಾತುಗಳ
ಮುಗಿಸಿದ,
ಆದರೆ....
ಲೆಕ್ಕವಿಲ್ಲದಷ್ಟು
ಜನರ
ಅಭಿಮಾನ
ತಂದಿತ್ತ ತನ್ನಾಟಕೆ
ಪದಗಳ
ಪುರಸ್ಕಾರವನೀಯಲಿಲ್ಲ,
ಬದಲಾಗಿ ತನ್ನ
ಕಣ್ಣೀರ ಹನಿಗಳ
ಅಭಿಷೇಕವಗೈದ
ಮೆಲ್ಲನೆ ತನ್ನ
ತಲೆಯ ಬಾಗುತ್ತಾ..
ದಾಂಧಲೆ...
ಸುಮ್ಮನೆ ಬಿಟ್ಟಿರಲಿಲ್ಲ
ನನಗೀಗಲೂ ನೆನಪಿದೆ
ಕೈಕೊಟ್ಟು ಇನ್ನೊಬ್ಬನನು
ವರಿಸಿದ ಅವಳ
ಮದುವೆಯಲಿ ನಾ
ಧಾಂದಲೆ ಮಾಡಿದ್ದು....
ಬೇಕಿದ್ದರೆ ಕೇಳಿ ನೋಡಿ
ಅಂದು ಅಡುಗೆ ಮಾಡುತ್ತಿದ್ದವರನು,
ಸಣ್ಣಗೆ ತೇಗು ತೆಗೆಯುತ್ತಾ
ನಾನೆದ್ದು ಕೈತೊಳೆದಾಗಲೇ
ಅವರು ನಿಟ್ಟುಸಿರು ಬಿಟ್ಟಿದ್ದು
ನನಗೀಗಲೂ ನೆನಪಿದೆ
ಕೈಕೊಟ್ಟು ಇನ್ನೊಬ್ಬನನು
ವರಿಸಿದ ಅವಳ
ಮದುವೆಯಲಿ ನಾ
ಧಾಂದಲೆ ಮಾಡಿದ್ದು....
ಬೇಕಿದ್ದರೆ ಕೇಳಿ ನೋಡಿ
ಅಂದು ಅಡುಗೆ ಮಾಡುತ್ತಿದ್ದವರನು,
ಸಣ್ಣಗೆ ತೇಗು ತೆಗೆಯುತ್ತಾ
ನಾನೆದ್ದು ಕೈತೊಳೆದಾಗಲೇ
ಅವರು ನಿಟ್ಟುಸಿರು ಬಿಟ್ಟಿದ್ದು
ವಿಪರ್ಯಾಸ
ಹಿಂದುತ್ವದ ಮಾತೆತ್ತಿದರೆ
ಕೋಮುವಾದಿ ಎಂದು ಜರೆದವರು;
ಪ್ರಗತಿಯ ಮಾತೆತ್ತಿದರೆ
ಗೋರಿಯ ಮೇಲಿನ ಪ್ರಗತಿಯದು
ಎಂದಪಹಾಸ್ಯವಗೈದವರು,
ಬೆಂಬಲದ ಅಭಯ"ಹಸ್ತ"ವ ತೋರಿದ್ದು
ಪ್ರಗತಿಯನು ಬದಿಗೊತ್ತಿ
ಹತೈವತ್ತು ವರ್ಷಗಳಿಂದ
ಬರಿಯ ಬಡ ಭಾರತೀಯರ
ಗೋರಿಯನೇ ಕಟ್ಟುತಿರುವ
ಹುಸಿ ಜಾತ್ಯಾತೀತರಿಗೆನುವುದು
ವಿಪರ್ಯಾಸವೇ ತಾನೇ..
ಕೋಮುವಾದಿ ಎಂದು ಜರೆದವರು;
ಪ್ರಗತಿಯ ಮಾತೆತ್ತಿದರೆ
ಗೋರಿಯ ಮೇಲಿನ ಪ್ರಗತಿಯದು
ಎಂದಪಹಾಸ್ಯವಗೈದವರು,
ಬೆಂಬಲದ ಅಭಯ"ಹಸ್ತ"ವ ತೋರಿದ್ದು
ಪ್ರಗತಿಯನು ಬದಿಗೊತ್ತಿ
ಹತೈವತ್ತು ವರ್ಷಗಳಿಂದ
ಬರಿಯ ಬಡ ಭಾರತೀಯರ
ಗೋರಿಯನೇ ಕಟ್ಟುತಿರುವ
ಹುಸಿ ಜಾತ್ಯಾತೀತರಿಗೆನುವುದು
ವಿಪರ್ಯಾಸವೇ ತಾನೇ..
Subscribe to:
Posts (Atom)