Thursday, 5 December 2013

ಆತ್ಮಹತ್ಯೆ....

ತಾ ಬೆಳೆದ ಬೆಳೆಗೆ
ಬೇಡಿದ ಬೆಲೆಗಿಂತಲೂ
ಮೀರಿದ ಧನರಾಶಿ ಸಿಕ್ಕಿತ್ತು,
ಆದರದನು ಪಡೆಯಲು
ಅವನೇ ಇಲ್ಲ, ಕಾರಣ
ಅನಂತ ದೂರಕ್ಕೆ ಹೋಗಿ ಬಿಟ್ಟ
ತನ್ನುಸಿರ ಬೆಲೆಯನು ತೆತ್ತು.
ಅವನಿಗೆ ಬದಲಾಗಿ
ಪಡೆಯಲಿರುವವರೂ ಕಂಗಾಲು,
ಎದೆಬಿರಿವಂತೆ ಅತ್ತೂ ಅತ್ತೂ...
ತನಗಧಿಕಾರ ದೊರೆಯುವುದಕೆ
ಇವರೆಲ್ಲರ ಬೆಂಬಲವೂ ಇತ್ತು,
ಎನುವ ಕಡೆಗಣಿಸಲಾಗದ ಸತ್ಯ
ಹಣ ಕೊಟ್ಟು ಕೈ ತೊಳೆದ
ಪುಡಾರಿಗೆಲ್ಲಿ ಗೊತ್ತು...?

No comments:

Post a Comment