ಹಸಿರ ವೈಭವದ ಮಧ್ಯೆ
ಗೋವುಗಳ ಹಿಂಡಿನ ನಡುವೆ
ನಿಂತು ಮೈಮರೆತು
ಕೊಳಲನೂದುವ ಕೃಷ್ಣನಿಂದ
ಜಗವ ಸಮ್ಮೋಹನಗೊಳಿಸೋ
ಕೊಳಲ ಗಾಯನವ
ಕಲಿಯುವಾಸೆ...
ಸಂಕಟಗಳ ಗೋವರ್ಧನವನೇ
ನನ್ನ ಕಿರು ಬೆರಳಲಿ
ಎತ್ತಿ ಹಿಡಿಯಬಲ್ಲ
ಮನೋಸ್ಥೈರ್ಯವ ಅವನಿಂದ
ತಿಳಿದುಕೊಳುವ ಆಸೆ.
ಜಗದ ಹಿತಕಾಗಿ
ಧರ್ಮದುಳಿವಿಗಾಗಿ
ಕುಟಿಲತೆಯ ಹೆಣೆಯಬಲ್ಲ
ಯೋಚನೆಗಳ, ಯೋಜನೆಗಳ
ಅವನಿಂದಲೇ ಕೇಳಿ ತಿಳಿಯುವಾಸೆ.
ಸಂಸಾರದ ರಣಾಂಗಣದ
ನಡುವೆ ಹತಾಶ ಭಾವದಲಿ
ಅವನ ಪಾದದಡಿಯಲಿ
ಮಂಡಿಯೂರಿ ಕುಳಿತು
ನನ್ನೆಲ್ಲಾ ಗೊಂದಲಗಳ
ಪರಿಹರಿಸೋ ಗೀತಾಸಾರವನು
ಅವನ ಬಾಯಾರೆ ಕೇಳುವಾಸೆ...
ಒಂದು ಪರಿಪೂರ್ಣ ವ್ಯಕ್ತಿತ್ವಕ್ಕೆ ಶ್ರೀಕೃಷ್ಣನೊಬ್ಬ ಉದಾಹರಣೆ.
ReplyDelete