Thursday, 11 December 2014

ಆಧ್ಯಾತ್ಮದ ಬೆಳಗು


ಬೆಳಗು ಬರಿಯ ಬೆಳಗಲ್ಲ
ಇದೆ ಅಲ್ಲೊಂದು ಆಧ್ಯಾತ್ಮಿಕತೆ,
ನೇಸರನೆ ಇಲ್ಲಿ
ದಿವ್ಯಜ್ಯೋತಿ ಸ್ವರೂಪದ ಪರಬ್ರಹ್ಮ,
ಜಗಕೆ ಸುಖದ
ಬೆಳಕನು ಚೆಲ್ಲಲಿವನೆ ಕಾರಣ,
ಇವನಿಲ್ಲದಿರೆ ಕತ್ತಲ ದುಃಖ,
ಅಲ್ಲೂ ಕೆಲವೊಮ್ಮೆ ಚಂದಿರಗೆ
ತನ್ನ ಬೆಳಕ ಕೊಟ್ಟು
ನಮ್ಮ ಬಾಳಿಗೆ ತಂಬೆಳಕ ಕೊಟ್ಟಾನು,
ಅವನಿಲ್ಲ ಎನುವುದೂ ಒಂದು ಭ್ರಮೆ,
ಅವನಿರುವಿಕೆ ನಮಗೆ ಕಾಣುವುದಿಲ್ಲವಷ್ಟೇ,
ಅವನದೆಲ್ಲೋ ಇನ್ನಾರ ಬದುಕನೋ
ಬೆಳಗಿಸುತ್ತಿದ್ದಿರಬಹುದು.
ನಮ್ಮದೇ ಪಾಪ ಕರ್ಮಗಳಿಗೆ
ಶಿಕ್ಷೆಯಾಗಿ ತಾನತ್ತ ಸರಿದಿರಬಹುದು
ಆದರೂ ಮತ್ತೆ ಬರದಿರುವವನವನಲ್ಲ
ಮತ್ತೆ ಮೂಡಿ ಬರಲು
ಸಜ್ಜಾಗುತ್ತಿದ್ದಿರಬಹುದು.
ಕಾಲದ ಜೊತೆ ಕಾಯುವುದಷ್ಟೇ
ನಮ್ಮ ಧರ್ಮ,
ಭರವಸೆಯ ಹೊಸ ಕಿರಣದಿಂದಲಿ
ಮತ್ತೆ ನಮ್ಮ ಬಾಳನು
ಬೆಳಗುವನವನೆನುವುದು ಖಚಿತ.
ಅದಕೆ ನನ್ನ ಪಾಲಿಗೆ
ಬರಿಯ ಬೆಳಗಲ್ಲ ಪ್ರತಿ ಬೆಳಗು
ನನಗದು ಆಧ್ಯಾತ್ಮಿಕತೆಯ ಬೆರಗು

1 comment:

  1. "ಕಾಲದ ಜೊತೆ ಕಾಯುವುದಷ್ಟೇ
    ನಮ್ಮ ಧರ್ಮ"
    ಇಡೀ ಕವನದ ಹೂರಣ್ವನ್ನು ಬಸಿದುಕೊಟ್ಟ ಸಾಲುಗಳಿವು.

    ReplyDelete