Friday, 5 December 2014

ಬೆರಗು


ಮೊಣಕಾಲಮೇಲೆ
ಬೆಸೆದ ಕೈಗಳ
ಹಾಸನು ಹಾಸಿ
ನಿನ ಮೊಗವ
ಅದರಮೇಲಿಟ್ಟು,
ಮನದೊಳಗೆ
ನನ್ನ ನೆನಪುಗಳಿಗೆ
ಕರೆಯಕೊಟ್ಟು
ಕುಳಿತು ಬಿಡು ಗೆಳತೀ,
ಆ ನೆನಪುಗಳು
ನಿನ್ನ ಮೊಗದಿ
ಚಿತ್ರಿಸುವ
ಮಂದಹಾಸವ
ನೋಡಿ
ನಾನು ಬೆರಗಾಗಬೇಕಿದೆ.

1 comment:

  1. ಅಂತ ಗಳಿಗೆ ಸ್ಥಂಭಿಸಿದರೂ ಸಂತಸವೇ...

    ReplyDelete