Friday, 19 December 2014

ಕಾಡುತಾವೆ...


ನಗುವೆನುವ
ಭಾವಕ್ಕಷ್ಟೇ
ಮುಖದ
ಹೊಸ್ತಿಲಲಿ
ನಿಲ್ಲಲವಕಾಶ,
ನೋವೆಲ್ಲವೂ
ಮನದ
ಕತ್ತಲ
ಕೋಣೆಯ
ಬಂಧಿ.
ಅವುಗಳಲ್ಲೇ
ಉಸಿರುಕಟ್ಟಿ
ಸಾಯಲಿ
ಎಂದೇ ಆಸೆ,
ಆದರೂ ಪಾಪಿ
ಚಿರಾಯು
ಎಂಬಂತೆ
ಸಾಯದೆ
ಕಾಡುತಾವೆ
ನನ್ನನೇ...
ಎದೆಯ
ಉರಿಯಾಗಿ.

1 comment:

  1. ನೋವುಗಳಿಗೆ ಸುಡುವುದೇ ಜಾಯಮಾನ!

    ReplyDelete