Wednesday, 1 October 2014

ಗಾಯ




ಭೋರ್ಗರೆವ
ನೀರ ಸೆಳೆತದಿಂದ
ಕೈಹಿಡಿದು ಮೇಲೆತ್ತಿ
ಬದುಕನುಳಿಸಿ ಕೊಟ್ಟ
ಯೋಧನಿಗೆ.....
ಕೈಯ ಮುಗಿಯುವಾಗ
ಆ ಮತಾಂಧ
ಯುವಕನಿಗೆ
ಕಾಣಿಸಿದ್ದು.......
ಅದೇ ಚಿರಪರಿಚಿತ ಮುಖ,
ಮತ್ತು ಅಂದು
ಅವನ ಅಭಿಮಾನಕ್ಕೆ
ಕಾರಣವಾಗಿದ್ದ
ಹಣೆಯ ಮೇಲೆ
ಒಣಗಿ ಕಲೆಯನುಳಿಸಿದ್ದ
ಕಲ್ಲೆಸೆತದ ಗಾಯ

1 comment:

  1. ತಥ್ ಆವೃತ್ತಕ್ಕಂಟಿಕೊಂಡ ಮೃಗೀಯ ಮನಸುಗಳಿಗೆಂದು ಪರಿವರ್ತನಾ?

    ReplyDelete