Monday, 27 October 2014

ಕು-ತಂತ್ರಜ್ಞಾನ


ಪ್ರೀತಿಸುವೆಯಾ ನನ್ನ..?
ಎಂದು ಅವಳು
ವಾಟ್ಸ್ ಅಪ್ ನಲಿ
ಕೇಳಿದಾಗ..
ಹತ್ತು ಬಾರಿ
ಹೌದೆಂದು
ಕಳುಹಿಸಿದರೂ..
ಅದನವಳಿಗೆ
ಮುಟ್ಟಿಸದ
ಹಾಳು ನೆಟ್ ವರ್ಕು..
ಕಾದು ಕಾದು ಆಕೆ,
ಯಾಕೆ ಗೆಳತನವೂ
ಬೇಡವೇ..???
ಅಂದಾಗಲೇ
ಒಮ್ಮೆಗೇ
ಹತ್ತು ಹೌದುಗಳನು
ಕಳುಹಿಸಿಬಿಟ್ಟಿತ್ತು.

1 comment:

  1. ಹತವಿಧಿ ಏನಪ್ಪ ಕುತಂತ್ರಜ್ಞಾನ!

    ReplyDelete