Wednesday, 29 October 2014

ಮದರಂಗಿ



ಅದ್ಯಾರದೋ
ಹೆಸರಿನ ಮದರಂಗಿ
ಅವಳ ಕೈಯ ತುಂಬಾ
ನಳನಳಿಸುತಿರಲು,
ಅದ ನೋಡಿದ
ಅವಳ ಮೊಗದಿ
ಹೂನಗೆಯು ಅರಳಿರಲು,
ಅವಳ ಖುಷಿಯೇ
ನನ್ನ ಖುಷಿಯೆನುವ
ಹಾಳು ಬಯಕೆಯೊಂದು
ಈಡೇರಿತ್ತು...
ಮರುಕ್ಷಣವೇ
ನನ್ನೇ ನಾ
ಕೊಂದು ಬಿಟ್ಟೆ,
ನನ್ನೊಳಗಿನ
ನೆತ್ತರ ಬಣ್ಣವನೆಲ್ಲಾ
ಆ ಮದರಂಗಿಗೇ
ಧಾರೆಯಿತ್ತು.

2 comments:

  1. ಗೋರಂಟಿಯೂ ನನ್ನ ನೆತ್ತರ ಬಣ್ಣವೇ!

    ReplyDelete
  2. ಅವಳ ಖುಷಿಯೇ ನನ್ನ ಖುಷಿ ಎಂಬ ಸವಿಯಾದ ಬಯಕೆ 'ಹಾಳುಬಯಕೆ' ಯಾಗುವುದು ಸೋತಾಗ, ನಿರಾಶೆಯಾದಾಗ. ಚಂದವಿದೆ

    ReplyDelete