Saturday 18 October, 2014

ಭಾವಯಾನ


ಮನದೊಳಗೆದ್ದ
ಭಾವನೆಗೆ
ಅದೇಕೋ ಅಲ್ಲಿ
ಉಸಿರುಕಟ್ಟಿಂದಂತಾಗಿ
ಸ್ವಾತಂತ್ರ್ಯದ
ಉತ್ಕಟ ಆಸೆಯಿಂದ
ಪದಗಳಾಗಿ
ಬಾಯ ಕದದೆಡೆಗೆ
ಓಡಿ ಬಂದರೆ,
ಬುದ್ದಿಯಾಜ್ಞೆಗೆ
ಬದ್ದವಾಗಿದ್ದ
ತುಟಿಗಳು
ತೆರೆದುಕೊಳ್ಳಲೇ ಇಲ್ಲ ;
ಮತ್ತದಕೆ
ಕಾಣಿಸಿದ್ದು
ಕಣ್ಣ ಸಣ್ಣ
ಕಿಟಕಿಗಳು,
ಥಟ್ಟನೆ ಕಣ್ಣೀರ
ಹನಿಯಾಗಿ
ಭದ್ರವಾಗಿರದ
ರೆಪ್ಪೆಗಳ ದೂಡಿ
ಹೊರಗದು
ಬಂದೇ ಬಿಟ್ಟಿತಲ್ಲ.

1 comment:

  1. ಭಾವಗಳನು ಕಣ್ಣ ಹನಿಗಳಾಗಿಸಿದ್ದು ನೈಜತೆಗೆ ಸಮೀಪದ ಪ್ರಕ್ರಿಯೆ.

    ReplyDelete