ಅದೇಕೋ ಮುಸ್ಸಂಜೆ ಕಾಡುತ್ತದೆ,
ಕೆಂಪು ಕೆಂಪಾದ ಬಾನು
ಕೈ ಬೀಸಿ ಕರೆಯುತ್ತದೆ,
ಬಾ ನನ್ನಂಗಣದಲಿ
ಉದುರಿಸು ನಿನ್ನ
ರಕ್ತ ಕಣ್ಣೀರನು,
ನಾ ಹೊತ್ತೊಯ್ದು
ಸಾಗರದ ಮಧ್ಯದಲ್ಲಿ
ಯಾರಿಗೂ ಗೊತ್ತಾಗದಂತೆ,
ಅದನು ಹೂತು ಬಿಡುವೆ
ಎಂದು ಸಂತೈಸುತ್ತದೆ,
ನಾನೋ ಆ ಆಗಸದ
ತುಂಬಾ ಹರಡಿಹ
ಮೋಡಗಳೆಡೆಯಲ್ಲಿ ಮರೆಯಾಗಿ
ಒಂದಿಷ್ಟು ಹೊತ್ತು
ನನ್ನಷ್ಟಕ್ಕೇ ಕೊರಗಿ ,
ನನ್ನಂತೆ ಒಂಟಿಯಾಗಿಹ
ನೇಸರನನು ಸಾಗರಕೆ
ತಳ್ಳಿಬಿಡಲು ಪ್ರಯತ್ನಿಸುತ್ತೇನೆ,
ನೀನಾದರೂ ಸುಖದ
ಸಾಗರದಲಿ ಮುಳುಗಿಕೋ ಎಂದು,
ಮತ್ತೆ ಮೆಲ್ಲನೆ ನಾ ಸಜ್ಜಾಗುತ್ತೇನೆ
ಕನಸಾಗಿ ಕಾಡುವ ನೆನಪಿನಾಗ್ನಿಗೆ
ಆಹುತಿಯಾಗುತ್ತೇನೆ...
ಅವನೂ ನನ್ನಂತೆ ಒಬ್ಬಂಟಿ, ಎನ್ನುವ ತಮ್ಮ ಹೋಲಿಕೆ ಮನ ಮುಟ್ಟಿತು.
ReplyDelete