Monday, 27 October 2014

ಹಬ್ಬ....


ಅದೆಲ್ಲಿಯೋ ಒಬ್ಬ ಕುಂಬಾರ
ಮಣ್ಣ ಹದ ಮಾಡಿ
ಹಣತೆಯನು ತಯಾರಿಸಿದ.
ಇನ್ನೊಬ್ಬ ಗಾಣಿಗ
ಎಳ್ಳಿನಿಂದ ದೀಪದೆಣ್ಣೆಯ ಸೆಳೆದ.
ಮತ್ಯಾರೋ ರೈತ
ಹತ್ತಿಯ ಬೆಳೆದರೆ...
ಅದ್ಯಾವುದೋ ಮನೆಯಾಕೆ
ಆ ಹತ್ತಿಯ ತೀಡಿ
ಬತ್ತಿಗಳ ಮಾಡಿದಳು.
ಎಲ್ಲವನೂ ಕೊಂಡ ನಾ
ನನ್ನ ಮನೆಯ ಬೆಳಗಿದಂತೆ,
ಅವರ ಮನೆಯನೂ
ಅರಿವಿಲ್ಲದಂತೆ ಬೆಳಗಿಸಿದ್ದೆ,
ಈ ದೇಶಗಳ ಹಬ್ಬಗಳೇ ಹಾಗೇ,
ದೀಪದಿಂದ ದೀಪವ
ಬೆಳಗಿದಂತೆ...

1 comment:

  1. ಗುಡಿ ಕೈಗಾರಿಕೆ ಮತ್ತಷ್ಟು ಮಗದಷ್ಟು ಬೆಳಗಲಿ, ದೈಪೀಪ್ಯಮಾನವಾಗಿ.

    ReplyDelete