ನಾವೆಲ್ಲರೂ ಶಿಶುಪಾಲರೇ.. ತಪ್ಪುಗಳರಿವಿದ್ದೂ ಒಂದರ ಮೇಲೊಂದು ತಪ್ಪ ಮಾಡುತ್ತಲೇ ಸಾಗುತ್ತೇವೆ.. ಸಾವಿನ ಶಿಕ್ಷೆ ಸಿಗುವವರೆಗೆ; ವ್ಯತ್ಯಾಸ ಎನುವುದೊಂದೇ, ಅವನಿಗೆಷ್ಟು ತಪ್ಪಿನ ಕ್ಷಮೆ ಎನುವುದು ಗೊತ್ತಿತ್ತು... ಅದರರಿವಿಲ್ಲದೆ ತಪ್ಪು ಮಾಡುತಿರಬೇಕು ನಾವು ಸಾಯುವವರೆಗೆ.
ಹುಟ್ಟಿ ಬರಬೇಕು ನೀ ಮತ್ತೆ ಈ ನೆಲದ ಮೇಲೆ ಭರತ ಮಾತೆಯ ರಕ್ಷಣೆಗೆ. ಮನದ ಈ ಬಯಕೆಯ ಬೆನ್ನಲ್ಲೇ ಕರಾಳ ಸತ್ಯದರ್ಶನ; ಬೇಡ ಬರಬೇಡ... ಮತ್ತದೇ ಧನದಾಹಿ ಮಾಧ್ಯಮದ ಹಾಳು ಕೆಮರಾ ಕಣ್ಣುಗಳು ನಿನ್ನ ತೋರಿಸಿ ಕೊಟ್ಟಾವು ಶತ್ರು ಪಾಳಯಕೆ.... ಅವುಗಳ ಧನದಾಹಕ್ಕೆ ಸುಮ್ಮನೆ ನೀ ನೆತ್ತರ ಹರಿಸಬೇಡ ಉಸಿರ ನಿಲಿಸಬೇಡ... ಹುಟ್ಟಿ ಬರಬೇಡ... ನೀ ಮತ್ತೆ ಹುಟ್ಟಿ ಬರಬೇಡ.
---ಕೆ.ಗುರುಪ್ರಸಾದ್
ಸಂದೀಪ್ ಉನ್ನಿಕೃಷ್ಣನ್ ನಂತಹ ವೀರತ್ವ ನಮ್ಮಲ್ಲೇ ಹುಟ್ಟಲಿ... ಒಂದು ಸಣ್ಣ ನುಡಿನಮನ ಆ
ದಿವ್ಯ ಚೇತನದ ಜನುಮ ದಿನದಂದು... ಅಂತೆಯೇ ಆ ದೇಶದ್ರೋಹಿ ಮಾದ್ಯಮಗಳಿಗೊಂದು
ಧಿಕ್ಕಾರ...
ನಲವತ್ತೊಂಭತ್ತು ದಿನದಲ್ಲಿ ಮಾಡಿದ ಸಾಧನೆಯ ಬಗೆಗೆ ಕೇಜ್ರೀವಾಲರಿಗೆ ಇದೆಯಂತೆ ಹೆಮ್ಮೆ; ಆದರಲ್ಲಿನ ಜನ ಹೇಳುತ್ತಾರೆ... ನೋಡಲು ಸಿಕ್ಕಿದ್ದು ಆಡಳಿತದವರದೇ ಧರಣಿ, ಮತ್ತು ಕೇಳಿಸಿದ್ದು ಬರೀ ಇವನ ಕೆಮ್ಮೇ...
ದೌರ್ಜನ್ಯದ ಕತ್ತಲೆಯಲೇ ಇನ್ನೆಷ್ಟು ಸಮಯ ಕಳೆಯಲಿ.. ನನ್ನ ಬಾಳಿಗೂ ಸುರಕ್ಷತೆಯ ಬೆಳಕ ಚೆಲ್ಲಲಾರಿರಾ...? ಈ ಪುಟ್ಟ ದೀಪಗಳಂತೆ ಭಯದ ತಮವನೊದ್ದೋಡಿಸಿ ನನ್ನೀ ಮುಖದಿ ಚೆಲುವ ನಗುವ ಮೂಡಿಸಲಾರಿರಾ...?
ಕತ್ತಲಾದಂತೆ ಕಣ್ ರೆಪ್ಪೆಯೊಳ ಬದಿಯ ತೆರೆಯ ಮೇಲೆ ನನ್ನ ಪ್ರೇಮದ ಕಥೆ ಪ್ರಾಸರವಾಗುತ್ತದೆ. ಎಲ್ಲರಿಗೂ ಇಷ್ಟವಾಗಲೇ ಬೇಕು ಅಂತೇನಿಲ್ಲವಲ್ಲ... ಹಾಗಾಗಿ ಒಂದಷ್ಟು ಕಣ್ಣೀರ ಹನಿಗಳು ಬೇಸತ್ತು ಹೊರಬರುತ್ತದೆ.
ಅವಳ ಮೋಸದಿಂದಾಗಿ ಒಡೆದ ನನ್ನ ಹೃದಯದಿಂದ ಒತ್ತರಿಸಿ ಬರುತಿದ್ದ ವಿರಹದ ಸಾಲುಗಳನು... ಪೂರ್ತಿ ಕವನವಾಗದಂತೆ ತಡೆ ಹಿಡಿದಿದ್ದು.... . . . . . . . ಕಣ್ಣೆದುರು ಹಾದು ಹೋದ ಹೊಸ ಹುಡುಗಿ.
ಹಣಕಾಸು ಸಚಿವರ ಫರ್ಮಾನು... ರ್ಯಾಲಿ ಟಿಕೆಟಿನ ಹಣಕ್ಕೆ ಕಟ್ಟಬೇಕಂತೆ ತೆರಿಗೆ ; ಕಟ್ಟೋಣವಂತೆ ಅದಕ್ಕೇನು...? ಆದರೆ ಆ ಹಣವ ಪಡೆದು ಕಳುಹಿಸಿ ಕೊಡುವಿರಾ ನಿಮ್ಮ ಇಟಲಿಯಮ್ಮನನ್ನು ಆಮೇಲೆ ಅವಳ ತವರಿಗೆ...?
ತನ್ನ ಶೀಲವನು ಕಪಟ ಪ್ರೇಮಧಾರೆಯೆರೆವ ತನ್ನಿನಿಯ ಕೊಟ್ಟ ಬರಿಯ ಉಡುಗೊರೆಯ ಬೆಲೆಗೆ ಮಾರಿಕೊಂಡವಳಿಗಿಂತ ವಿಧಿಯಾಟಕೆ ಬಲಿಯಾಗಿ ತನ್ನ ಹಸಿವನಾರಿಸುವ ಸಲುವಾಗಿ ಕಾಮುಕರಿಗೆ ಒಡಲಿನೂಟವ ಬಡಿಸುವ ವೇಶ್ಯೆಯೇ ಮೇಲು.
ಪ್ರೀತಿಸುವವರ ಒಂದು ದಿನದ ಹುಚ್ಚಾಟಕ್ಕಷ್ಟೇ ನನ್ನ ವಿರೋಧ... ನೈಜ ಪ್ರೀತಿಗಲ್ಲ; ನನಗಿನ್ನೂ ದಕ್ಕಿಲ್ಲ ಅನ್ನುವುದಕ್ಕಾಗಿ ಆಕ್ರೋಶಕೆ ಹುಟ್ಟಿದ ವಿರೋಧವಲ್ಲ; ಒಂದು ದಿನದ ಪ್ರೀತಿಯ ದಕ್ಕಿಸಿಕೊಳ್ಳುವ ಮನಸೇ ನನಗಿಲ್ಲ; ಅದಕಾಗೇ ಒಟ್ಟುಗೂಡಿಸಿ ತೆಗೆದಿಡುತ್ತಿದ್ದೇನೆ ನನ್ನೆಲ್ಲಾ ಪ್ರೀತಿಯ, ಏಳು ಜನ್ಮಗಳ ಪ್ರತಿನಿಧಿಸುವ ಏಳು ಹೆಜ್ಜೆಗಳ ನನ್ನ ಜೊತೆಗಿಡುವವಳ ಮೇಲೆ ಸುರಿಸಬೇಕಲ್ಲ.
ಮಾಯಾವಾಗುತಿದೆ ಸಮವಸ್ತ್ರವ ಧರಿಸಿ ಬೆನ್ನಿನ ಮೇಲೆ ಬ್ಯಾಗನೇರಿಸಿ ಗುಂಪಾಗಿ ಓಡೋಡಿ, ರಸ್ತೆ ಬದಿಯಲಿ ಕುಣಿದಾಡಿ ನಗೆಯ ಚೆಲ್ಲಿ ಸಾಗುವ ಚಿಣ್ಣರ ಸಾಲುಗಳು.. ಈಗ ಅವರೆಲ್ಲರೂ ಸ್ಕೂಲ್ ವ್ಯಾನೆನುವ ಹಳದಿ ಬಣ್ಣದ ಚಲಿಸುವ ಜೈಲಿನ ಬಂಧಿಗಳು....
ನನ್ನ ಬಾಳೆಂಬ ತಾವರೆಯ ಎಲೆಯಲಿ, ಅವಳೆಂಬ ನೀರ ಹನಿ ಅತ್ತಿತ್ತ ಉರುಳಾಡಿ, ಪ್ರೀತಿಯ ಕಚಗುಳಿಯನಿಟ್ಟು, ಜಾರಿ ಇನ್ನೊಂದೆಲೆಯ ನಡುವಲಿ ನೆಲೆಯಾದಾಗ, ನನ್ನೊಡಲ ನಾ ಒಮ್ಮೆ ನೋಡಿಕೊಂಡೆ. ಅವಳು ಸುಳಿದಾಡಿದ ಕುರುಹೇ ಇದ್ದಿರಲಿಲ್ಲ.
ಅಸಮಾನತೆಗಳ ಆತ್ಮಕ್ಕೆ ಅಹಿಂಸೆಯ ಚರ್ಮ ತೊಟ್ಟಿದ್ದವರಿಗೆ, ಗುಂಡಿಟ್ಟ ಯುವಕನ ಹೃದಯದಲಿದ್ದುದು ಒಂದೇ ಆಸೆಯಂತೆ; ಅದು ತಾಯಿ ಭಾರತಿಯ ಪೂಜಕರಿಗೆ... ನೆಮ್ಮದಿಯ ತಾಯ್ನೆಲವ ಉಳಿಸಿಕೊಡುವುದಂತೆ.