Thursday 6 March 2014

ತೇರನೆಳೆಯಬೇಕು...ತೇರನೆಳೆಯಬೇಕು....
ಉತ್ಸವದ ತೇರನೆಳೆಯಬೇಕು...
ಊರೊಡೆಯನ ಚೆಂದದ ತೇರನೆಳಯಬೇಕು...
ವರುಷ ಪೂರ್ತಿ ಗರ್ಭಗುಡಿಯೊಳಗಿರುವ
ದೇವನಿಗೆ ವರ್ಷಕೊಮ್ಮೆ ಬೀದಿಗಿಳಿಯುವಾಸೆ...
ಆ ಅಸೆಯ ಪೂರೈಸೆ ಭಕ್ತವೃಂದ
ಸಿಂಗರಿಸಿರುವ ದೊಡ್ಡ ತೇರನೆಳಯಬೇಕು...
ಉತ್ಸವದ ತೇರನೆಳೆಯಬೇಕು...

ತುದಿಯಲಿಹ ಕಲಶದ ಹೊಳಪ ನೋಡುತ
ಬಣ್ಣ ಬಣ್ಣದ ಬಾವುಟದ ಚೆಲುವ ಕಾಣುತ
ಗಜರಾಜನ ಕರ್ಣದಂತಿಹ ಅಕ್ಕ ಪಕ್ಕದೆರಡು
ದೊಡ್ಡ ದೊಡ್ಡ ಬಾವುಟಕೆ ಮನವ ಸೋಲುತಾ
ತೇರನೆಳೆಯಬೇಕು.....
ಉತ್ಸವದ ತೇರನೆಳೆಯಬೇಕು....

ನಡುವೆ ಪೀಠದಲಿ ರಾಜಾರೋಷದಿ ಕುಳಿತಿಹ
ಮಹಾಲಿಂಗೇಶ್ವರಗೆ ಜಯ ಘೋಷವ ಹಾಕುತ
ರಥವನನತಿ ದೂರದಿ ನಿಲಿಸಿ ಸುಡುಮದ್ದ ಸಿಡಿಸುತಾ
ವರುಷಕೊಮ್ಮೆ ಹೊರ ಬರುವ ದೇವನ
ಮನಕಾನಂದ ನೀಡಬೇಕು....
ತೇರನೆಳೆಯಬೇಕು....
ಉತ್ಸವದ ತೇರನೆಳೆಯಬೇಕು....

No comments:

Post a Comment