Thursday, 6 March, 2014

ಕುರುಹು...


ನನ್ನ ಬಾಳೆಂಬ
ತಾವರೆಯ ಎಲೆಯಲಿ,
ಅವಳೆಂಬ ನೀರ ಹನಿ
ಅತ್ತಿತ್ತ ಉರುಳಾಡಿ,
ಪ್ರೀತಿಯ ಕಚಗುಳಿಯನಿಟ್ಟು,
ಜಾರಿ ಇನ್ನೊಂದೆಲೆಯ
ನಡುವಲಿ ನೆಲೆಯಾದಾಗ,
ನನ್ನೊಡಲ ನಾ
ಒಮ್ಮೆ ನೋಡಿಕೊಂಡೆ.
ಅವಳು ಸುಳಿದಾಡಿದ
ಕುರುಹೇ ಇದ್ದಿರಲಿಲ್ಲ.

No comments:

Post a Comment