Saturday, 29 March 2014

ಜೀವನ...


ನಿಲ್ಲುವ ಹಾಗಿಲ್ಲ
ಕ್ಷಣ ಕ್ಷಣಕೂ...
ಮುಂದಡಿ ಇಡಲೇಬೇಕು.
ಇಡುವ ಪಾದದಡಿಯಲಿ
ಸುಖವೆನುವ ಹೂವಿದೆಯೋ
ದುಃಖವೆನುವ ಮುಳ್ಳಿದೆಯೋ
ಯಾರಿಗೆ ಗೊತ್ತು...?
ಸಾವಿನ ನಿಲ್ದಾಣ
ಸಿಗುವವರೆಗೂ
ತುಳಿದು ಹೂವ ನಗುತಲೋ
ಅಥವ ಮುಳ್ಳಿನ ಮೇಲಿಟ್ಟ
ಕಾಲನು ಕುಂಟುತಲೋ
ಸಾಗಲೇಬೇಕು...
ನಿಲ್ಲುವ ಹಾಗಿಲ್ಲ...
ಕ್ಷಣ ಕ್ಷಣಕೂ
ಮುಂದಡಿ ಇಡಲೇಬೇಕು.

No comments:

Post a Comment