Thursday, 21 November 2013

ಗ್ಲಾ(ಗ್ರಾ)ಮರ್ರು....

ನಾ ಕೊಟ್ಟ ಪ್ರೇಮಪತ್ರವನು
ನಿರಾಕರಣೆಯೊಂದಿಗೆ
ಹಿಂದಿರುಗಿಸುವಾಗ
ಆಕೆ ಹೇಳಿದ್ದು.....
" ನಿನ್ನ ಗ್ಲಾಮರ್ರಾದ್ರೂ
ಸಹಿಸಿಕೊಳ್ಳಬಹುದಿತ್ತು...
ಆದರೆ ಗ್ರಾಮರನ್ನಲ್ಲ..."
.
.
.
ಆವತ್ತಿನಿಂದ ಹುಡುಕಾಡುತ್ತಿದ್ದೇನೆ.
ಇಂಗ್ಲೀಷಿನಲಿ ಪ್ರೇಮಪತ್ರ ಬರೆಯೆಂದು
ಸಲಹೆಯಿತ್ತ ಗೆಳೆಯನನು....
ಹಾಳಾದವ ಇನ್ನೂ ಸಿಕ್ಕಿಲ್ಲ.

No comments:

Post a Comment