Thursday, 21 November 2013

ವಿಚಿತ್ರ...





ಗುಡುಗುತ್ತಾ ಬುವಿಯ ಮೇಲೆ
ಬಿಡದೆ ಮಳೆಯ ಬಾಣವನು
ಬಿಡುತ್ತಿದ್ದ ಮೋಡವದು,
ನೋಡು ನೋಡುತ್ತಿದ್ದಂತೆ
ಕರಗಿ ನಾಶವಾಗಿತ್ತು ;
ಸಹನೆಯಿಂದಲಿ
ಬಾಣದ ನೋವುನುಂಡ
ವಸುಧೆಯ ಮುಖದಲ್ಲಿ
ಮೆಲ್ಲ ಮೆಲ್ಲಗೆ ಹಸಿರ
ಹೂನಗೆ ಅರಳತೊಡಗಿತ್ತು

No comments:

Post a Comment