Thursday, 21 November, 2013

ಅಪಸ್ವರ

ನನ್ನ ಮಧುರ, ರೋಚಕ
ಪ್ರೇಮ ಕಥಾನಕವು
ನಿರಾತಂಕವಾಗಿ ಸಾಗಿ
ಮಿಲನದ ಹೊಸ್ತಿಲಲಿ
ನಿಂತು ಕಟ್ಟತೊಡಗಿದ್ದೆ
ನನ್ನಾಕೆಯ ಕುತ್ತಿಗೆಗೆ ತಾಳಿ ;
ಆದರೆ ಸುಖಾಂತ್ಯಕೆ
ತಿರುವೊಂದನು ನೀಡಿ ನನ್ನ
ಬಾಳನು ದುಃಖಮಯವಾಗಿಸಿದ್ದು,
ಪ್ರತಿ ಮುಂಜಾನೆಯಲಿ
ಅಪಸ್ವರದ ಆಲಾಪವನೆತ್ತೋ
ಹಾಳಾದ ಒಂದು ಕೋಳಿ.

No comments:

Post a Comment