Thursday, 21 November 2013

ಬಿತ್ತನೆ...







ಏಳು ಕುದುರೆಯ ಮೇಲೆ,
ಬೆಳ್ಳಿಕಿರಣದ ನೇಗಿಲನಿರಿಸಿ,
ಜಗದ ಗದ್ದೆಯಲಿ
ಬೆಳಕ ಬಿತ್ತತೊಡಗಿದ ನೇಸರ;
ಉಳುವ ಸಮಯದಿ ರವಿಗೆ
ದಣಿವು ಕಾಡಿಸಲೇ ಇಲ್ಲ
ಕಾರಣ.. ಕೇಳುತಲೇ ದುಡಿದಿದ್ದ
ಬಾನಾಡಿಗಳ ಹಾಡಿನಿಂಚರ.

No comments:

Post a Comment