Wednesday 20 November 2013

ಶ್ರೇಷ್ಠ ತಾಯಿ...ಇಲ್ಲೊಬ್ಬ ತಾಯಿ
ತನ್ನ ಮಗಳಿಗಾದ
ಅನ್ಯಾಯವ ಕಂಡು
ಅತ್ತು ಗೋಳಾಡುತ್ತಿದ್ದರೆ,
ಅಲ್ಲೊಬ್ಬ ಅತ್ಯಾಚಾರಿಯ
ತಾಯಿಯು ತನ್ನ
ಕಂದನನು ಕಾಪಾಡಲು
ಹೆಣಗಾಡುತ್ತಿದ್ದಾಳೆ..
ನನ್ನ ತಾಯಿ ಶ್ರೇಷ್ಠಳೇ...
ಎಂದು ಹೇಳಿಯಾರು
ಎಲ್ಲ ಮಕ್ಕಳು..
ಆದರೆ ಲೋಕಕ್ಕೆ
ಧರ್ಮವನರಿತ ತಾಯಿ
ಮಾತ್ರ ಶ್ರೇಷ್ಠಳು...

No comments:

Post a Comment