Thursday, 21 November 2013

ರಕ್ಷಾ ಬಂಧನ



ದೇವನೆದುರಲಿಟ್ಟು ಪೂಜಿಸಿದ
ರೇಶಿಮೆಯ ನೂಲ ಗೊಂಚಲನು
ನನ್ನ ಕೈಗಳಲಿ ಕಟ್ಟಿ
ಇಡಿಯ ಜೀವನಕೆ
ದೇವರಕ್ಷಣೆಯನೀವ
ಅಕ್ಕ/ತಂಗಿಯರಿಗೆ...
ಈ ಬಡಪಾಯಿ
ಅಣ್ಣ/ತಮ್ಮನಿಂದ ಸಿಕ್ಕಿದ್ದೇನು ?
ಬರಿಯ ನನ್ನುಸಿರು
ಇರುವಷ್ಟು ಕಾಲದವರೆಗಿನ
ರಕ್ಷಣೆಯ ವಾಗ್ದಾನ...
ಮತ್ತೊಂದು ಹಾರೈಕೆ,
ಗಾಢವಾಗಿಸಲಿ ನಮ್ಮೊಳಗಿರುವ
ಸಹೋದರತೆಯ
ಈ ರಕ್ಷಾ ಬಂಧನ...

No comments:

Post a Comment