Wednesday, 20 November 2013

ಭಗತ್ ಸಿಂಗ್...



ಸ್ವಾತಂತ್ರ್ಯದ ಹೊನ್ನ ಪೀಠದಿ
ತಾಯಿ ಭಾರತಿಯ ಪ್ರತಿಷ್ಠಾಪಿಸಲು
ತನ್ನೊಡಲ ಬಿಸಿ ನೆತ್ತರನೆ
ತರ್ಪಣಗೈದ ಅಸಮ ಸಾಹಸಿಯಿವ;
ತುಂಬಿದ ಸದನದಲಿ
ಆಹುತಿಯ ಪಡೆಯದೆಯೇ
ಕ್ರಾಂತಿಯ ಕಿಚ್ಚನು
ಸ್ಪೋಟಿಸಿದ ರಣಕ್ರಾಂತಿಕಾರಿಯಿವ;
ಸೆರೆವಾಸದಲಿ ನೂರ ಹದಿನಾರು
ದಿನಗಳ ಉಪವಾಸವನುಗೈದು
ತನ್ನ ಕಾರ್ಯ ಸಾಧಿಸುತ
ಹಸಿವನು ಗೆದ್ದ ಮಹಾತಪಸ್ವಿಯಿವ;
ಸೊಗಸಿನ ನಗುವ ಹೊತ್ತೇ
ಕೊರಳನು ಉರುಳಿಗಿತ್ತು, ತಾಯಿ
ಭಾರತಿಯ ಹೃದಯದರಮನೆಯಲ್ಲಿ
ಚಿರಕಾಲ ವಾಸಿಸುವ ಸೌಭಾಗ್ಯವನು
ಗಳಿಸಿಕೊಂಡ ಮಹಾತ್ಮನಿವ...

No comments:

Post a Comment