Wednesday, 20 November 2013

ಕುಲ ಕಸುಬು



ಕುಲದ ವೃತ್ತಿಯನೇ ನಾ ನನ್ನ
ವೃತ್ತಿಯನ್ನಾಗಿ ಸ್ವೀಕರಿಸಿದ್ದಿದ್ದರೆ,
ಉಳಿ,ಸುತ್ತಿಗೆಯ ಸಲಕರಣೆಯ ಹಿಡಿದು
ಲೋಹದಲೋ,ಕಾಷ್ಠದಲೋ
ಅಥವಾ ಕಠಿಣ ಶಿಲೆಯಲೋ
ಮಾಡುತ್ತಿದ್ದೆ ಕಲಾಕೃತಿಗಳ ಕೆತ್ತನೆ ;
ನಾನೀಗ ಮಾಡುತಿರುವ ವೃತ್ತಿಗೂ,
ಕುಲವೃತ್ತಿಗೂ ಸಾಮ್ಯತೆಯೇ ಇಲ್ಲ,
ಆದರೆ ಪ್ರವೃತ್ತಿಯಲಿ ಹೋಲಿಕೆಯಿದೆ
ಹಾಳೆಯ ಶಿಲೆಯಲಿ ಕಾವ್ಯಕಲಾಕೃತಿಯ
ಕೆತ್ತುವ ಪ್ರಯತ್ನ ಮಾಡುತ್ತೇನೆ.
ಇದಕೆ ನಾ ಬಳಸುವ ಸಲಕರಣೆ.. ಕಲ್ಪನೆ.

No comments:

Post a Comment