ಮುಂಜಾನೆ ಬಲು ಬೇಗನೆದ್ದು,
ಅಮ್ಮ ಕಾಯಿಸಿಟ್ಟಿದ್ದ ಎಣ್ಣೆಯನು
ಮೈಯ ಇಂಚಿಂಚಿಗೂ
ಸವರಿ, ತಿಕ್ಕಿ ತೀಡಿ,
ಸೂರ್ಯನೆಳೆ ಬಿಸಿಲಿಗೆ
ಒಂದಷ್ಟು ಹೊತ್ತು ಮೈಯನೊಡ್ಡಿ,
ಮತ್ತೆದ್ದು ಸಿಂಗರಿಸಿದ
ಬಚ್ಚಲು ಮನೆಯಲಿ
ಮಾಡುವೆನು...
ತಾಮ್ರದಾ ಹಂಡೆಯೊಳಗಿನ
ಬಿಸಿ ನೀರಿನ ಜಳಕ;
ಈ ಹಬ್ಬವೇ ಹಾಗೆ...
ಕೊಡುವುದೆಲ್ಲರ ಮನಕೆ ಪುಳಕ;
ಕತ್ತಲಲಿ ಹರಡುವುದು
ಪ್ರತಿಮನೆಯಂಗಳದಿ
ಹಣತೆಯಾ ದೀಪಗಳ ಬೆಳಕ.
No comments:
Post a Comment